Monday, 28 January 2013

ಬ್ರಿಟಿಷರ ವಿರುದ್ಧ ತನ್ನ ರಕ್ತ ಚೆಲ್ಲಿದ ಟಿಪ್ಪು ದೇಶ ದ್ರೋಹಿ, ಹಿಂದೂ ದ್ರೋಹಿ ಹೇಗಾಗುತ್ತಾನೆ?

ರಘೋತ್ತಮ ಹೊ.ಬ, 

‘ಟಿಪ್ಪು ಸುಲ್ತಾ ನ್ ಸ್ವಾತಂ ತ್ರ್ಯ ಹೋರಾಟಗಾರ ಎನ್ನುವುದನ್ನು ಕೇಳಿದರೆ ತಲೆ ಚಚ್ಚಿಕೊಳ್ಳಬೇಕು  ಎನಿಸುತ್ತದೆ. ಎಲ್ಲಾ ರಾಜರು ತಮ್ಮರಾಜ್ಯವನ್ನು ಉಳಿಸಿ ಕೊ ಳ್ಳಲು  ಹೋರಾಡಿ ದಂತೆ ಟಿಪ್ಪು ಕೂಡ ಹೋರಾಡಿದ್ದಾನೆ. ಅವನ ಹೆಸರನ್ನು ಭಗತ್‌ಸಿಂಗ್, ಸುಭಾಷ್‌ಚಂದ್ರ ಬೋಸ್, ಮಹಾತ್ಮ ಗಾಂಧಿ ಜೊತೆ ಸೇರಿಸಿ ಕೊಳ್ಳಲು ಸಾಧ್ಯವಿಲ್ಲ. ಟಿಪ್ಪುವಿನ ಬಗ್ಗೆ ಡಾ.ಎಂ.ಚಿದಾನಂದ ಮೂರ್ತಿಯವರ ಬಾಯಿಯಿಂದ ಉದುರಿದ ’ಶ್ರೇಷ್ಠ’ ಅಣಿ ಮುತ್ತುಗಳಿವು...!
ಬಹುಶಃ ಸ್ವಾತಂತ್ರ್ಯ ಹೋರಾಟವೊಂದಕ್ಕೆ, ಆ ಹೋರಾಟದಲ್ಲಿ ಭಾಗವಹಿಸಿದ ಪ್ರತಿಯೊಬ್ಬರ ನೆತ್ತರಿನ ಹನಿಗೆ ಇದಕ್ಕಿಂತ ಕ್ರೂರವಾಗಿ ಅಪಮಾನ ಎಸಗಲು ಸಾಧ್ಯವಿಲ್ಲ. ಹಾಗೆ ಹೇಳುವುದಾದರೆ ಚಿದಾನಂದಮೂರ್ತಿ ಯಂಥವರ ಇಂತಹ ಮಾತುಗಳು ಈ ದೇಶದ, ಈ ದೇಶ ಕಟ್ಟುವಲ್ಲಿ ಯತ್ನಿಸಿದ ಪ್ರತಿಯೊಬ್ಬರನ್ನೂ ಅಪಮಾನಿಸಿದಂತೆ. ಚಿಮೂಗಳು ಹೇಳಿದ್ದೇ ಸತ್ಯವಾದರೆ ಭಾರತದ ಇತಿಹಾಸದಲ್ಲಿ ಸ್ವಾತಂತ್ರ್ಯ ಹೋರಾಟ ಎಂಬ ಅಧ್ಯಾಯಕ್ಕೆ  ಬೆಲೆಯೇ ಇರುವುದಿಲ್ಲ.  ಏಕೆಂದರೆ ಬಹುತೇಕ ಸ್ವಾತಂತ್ರ್ಯ ಹೋರಾಟಗಾರರಿಗೆ  ತಾವು ಹಿಂದುತ್ವವಾದಿಗಳು, ನಾವು ಹಿಂದೂಗಳಿಗಾಗಿಯೇ  ಬ್ರಿಟಿಷರ ವಿರುದ್ಧ ಹೋರಾಡಬೇಕು, ದೇಶ ಕಟ್ಟಿಕೊಂಡು ನಮಗೇನಾಗಬೇಕು ಎಂಬ ಧೋರಣೆ ಖಂಡಿತ ಇರಲಿಲ್ಲ. ಸ್ವಾ ತಂತ್ರ್ಯ ಹೋರಾಟಗಾ ರರಿಗೆ ಇಂತಹ ಧೋರಣೆ ಇರಲಿಲ್ಲವೆಂದರೆ ಚಿಮೂ ರವರ ಪ್ರಕಾರ ಅಂತಹವರ್‍ ಯಾರೂ ಸ್ವಾತಂತ್ರ್ಯ ಹೋರಾಟಗಾರರೇ ಅಲ್ಲ!

ಗಾಂಧಿ ಕೊಂದ ಗೋಡ್ಸೆ ಓದಿದ್ದು ಎಲ್ಲಿ...?

 ಆರ್.ಎಸ್ ಮಾಲಗತ್ತಿ

ಮೈಸೂರು ಹುಲಿ ಟಿಪ್ಪು ಸುಲ್ತಾನ್ ವಿವಿಯನ್ನು ರಾಜ್ಯದಲ್ಲಿ ಸ್ಥಾಪನೆ ಮಾಡುವುದಾಗಿ ಕೇಂದ್ರ ಸಚಿವ ರಹೆಮಾನ್ ಖಾನ್ ಘೋಷಿಸುತ್ತಿದ್ದಂತೆ ಪರವಿರೋಧ ಚರ್ಚೆಗಳು ವ್ಯಾಪಕವಾಗಿ ನಡೆದಿವೆ. ರಾಜ್ಯದಲ್ಲಿ ಟಿಪ್ಪು ವಿವಿ ಸ್ಥಾಪಿಸಿದರೆ ಅದು ಉಗ್ರರ ತಾಣವಾಗುತ್ತದೆ ಎಂದೆಲ್ಲ ವ್ಯಾಖ್ಯಾನಿಸಲಾಗತ್ತಿದೆ. ವಿವಿ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ ಎಂದು ರಾಜ್ಯಾದ್ಯಂತ ಹಿಂದೂಪರ ಸಂಘಟನೆಗಳಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದೆ.
ಈ ಸಂಘಟನೆಗಳು ಜಾತಿ ಮತ್ತು ಧರ್ಮಾ ಧಾರಿತ ವಿವಿಯನ್ನು ವಿರೋಧಿಸಲಿ ಆದರೆ ವಿವಿಗೆ ಟಿಪ್ಪು ಹೆಸರು ವಿರೋಧಿಸುವುದು ಪೂರ್ವಾಗ್ರಹ ಪೀಡಿತರಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ತೋರುತ್ತದೆ. ಇವರು ಕೊಡುವ ಕಾರಣಗಳು ನೋಡಿದರೆ ವೀರ ಸೇನಾನಿಗೆ ಅವಮಾನ ಮಾಡುತ್ತಿದ್ದಾರೆ. ಅದೇ ಟಿಪ್ಪು ಸುಲ್ತಾನ್ ಒಬ್ಬ ಹಿಂದೂವಾಗಿದ್ದರೆ ಅವನೊಬ್ಬ ಮಹಾನ್ ಸೇನಾನಿ ಎಂದು ಜಂಭ ಕೊಚ್ಚಿಕೊಂಡು ಅದೇ ಹೆಸರಿನಲ್ಲಿ ವಿವಿ ಸ್ಥಾಪನೆ ಮಾಡುವಂತೆ ಒತ್ತಾಯಿಸುತ್ತಿದ್ದರು ಎನ್ನುವುದರಲ್ಲಿ ಸಂಶಯವೇ ಬೇಡ ಎಂದೆನಿಸುತ್ತದೆ ಅಲ್ಲವೇ.

ವಿಧಾನಸಭೆ ವಿಸರ್ಜನೆಯೇ ಸೂಕ್ತ

 ಮುಮ್ತಾಝ್ ಅಲೀಂ,

ನಮ್ಮ ಟಿವಿ ಚಾನೆಲ್ಗಳ ಕೆಲ ಆಂಕರ್ ಮತ್ತು ರಾಜಕೀಯ ವರದಿಗಾರರಿಗೆ ಅದೇನು ಅವಸರವೋ ಗೊತ್ತಿಲ್ಲ. ಎಲ್ಲವೂ ಅವರು ಅಂದು ಕೊಂಡಂತೆ ಆ ಕ್ಷಣವೇ ಆಗಿಬಿಡಬೇಕು. ಆದರೆ, ವಾಸ್ತವಿಕ ನೆಲೆಗಟ್ಟಿನಲ್ಲಿ ಅವಕಾಶವಾದಿ ಮತ್ತು ಚಂಚಲ ಗುಣದ ರಾಜಕೀಯ ಅಥವಾ ರಾಜಕಾರ ಣಿಗಳು ಹಾಗಿರುವುದಿಲ್ಲ. ರಾಜಕೀಯದಲ್ಲಿ ಟೈಂ ಫ್ಯಾಕ್ಟರ್‌ಗೆ ಅತ್ಯಂತ ಮಹತ್ವ.
ರಾಜ್ಯ ರಾಜಕೀಯದ ಮೊನ್ನೆಯ ಘಟನಾವಳಿ ಗಳನ್ನೇ ನೋಡಿ. ಕನ್ನಡ ಟಿವಿ ಚಾನೆಲ್‌ಗಳ ಕೆಲ ಆಂಕರ್‌ಗಳ ಕೂಗಾಟ, ಚೀರಾಟ, ಪ್ರದರ್ಶಿಸಿದ ಪಾಂಡಿತ್ಯ ಮತ್ತು ಅತಿರೇಕ ಎಲ್ಲವೂ ಅಸಂಬದ್ಧ. ಉತ್ತಮ ಸಮಾಜಕ್ಕಾಗಿ ಎಂದು ಹೇಳುವ ಟಿವಿ ಚಾನೆಲ್‌ವೊಂದರ ಆಂಕರ್‌ಗೆ ಈ ಸರ್ಕಾರ ಈ ಕ್ಷಣವೇ ನೆಲಕಚ್ಚಿಬಿಡಬೇಕು ಎಂಬ ಹಂಬಲ.
ಇದಕ್ಕೂ ಒಂದು ಹೆಜ್ಜೆ ಮುಂದೆ ಎಂಬಂತೆ ಮಾತಲ್ಲೇ ಪಾಂಡಿತ್ಯ ಪ್ರದರ್ಶಿಸುವ ಮತ್ತೊಂದು ಟಿವಿಯ ಮಹಾಶಯರು ಟಿವಿ ಸ್ಟುಡಿಯೋನೊಳಗೆ ಆಂಕರ್ ಸ್ಥಾನದಲ್ಲಿ ಕುಳಿತು ಉದುರಿಸಿದ ನುಡಿ ಮುತ್ತುಗಳು ಅವರಿಗೇ ಪ್ರಿಯ. ರಾಹುಕಾಲ-ಗುಳಿಗ ಕಾಲ ನೋಡಿಕೊಂಡು ಯಡಿಯೂರಪ್ಪ ಬೆಂಬಲಿಗ ಪಡೆಯ ೧೩ ಶಾಸಕರು ರಾಜೀನಾಮೆ ಪತ್ರ ದೊಂದಿಗೆ ಸ್ಪೀಕರ್ ಕಚೇರಿಗೆ ಬಂದರು. ಆದರೆ, ಸ್ಪೀಕರ್ ಇರಲಿಲ್ಲ. ಇದರಿಂದ ಪಿತ್ತ ನೆತ್ತಿಗೇರಿದ್ದು ಮಾತ್ರ ಅಲ್ಲಿದ್ದ ಆ ಶಾಸಕರಿಗಿಂತ ಹೆಚ್ಚಾಗಿ ನಮ್ಮ ಈ ಬುದ್ಧಿವಂತ ಆಂಕರ್ ಮಹಾಶಯರಿಗೆ. ಸ್ಪೀಕರ್ ವಿರುದ್ಧದ ಇವರ ಸಿಕ್ಕಾಪಟ್ಟೆ ವಾಗ್ದಾಳಿಗೆ ನೇರ ಸಂಪರ್ಕದಲ್ಲಿ ಸಿಲುಕಿದ ಅವರ ರಾಜಕೀಯ ವರದಿಗಾರನೇ ಕಕ್ಕಾಬಿಕ್ಕಿ. ಟಿವಿ ಆಂಕರ್‌ಗಳ ಇಂತಹ ವರ್ತನೆ ಇದೇ ಮೊದಲೇನಲ್ಲ. ಸೆನ್ಸೇಷನಲ್ ವಿಷಯಗಳು ಬಂದಾಗ ಮಾಧ್ಯಮಗಳು ಸ್ವಲ್ಪ ಸಂಯಮದಿಂದ ನಡೆದು ಕೊಂಡರೆ ಒಳ್ಳೆಯದು. ಇರಲಿ, ಆ ಮಾತು ಬೇರೆ. ಅಷ್ಟಕ್ಕೂ, ಸ್ಪೀಕರ್ ಭೋಪಯ್ಯ ವಿದೇಶ ಪ್ರವಾ ಸಕ್ಕೆ ಹೋಗುವ ಹಾಗಿಲ್ಲವಾ?

ಉಂಡು ಮಲಗದ ಗಂಡ-ಹೆಂಡಿರ ಜಗಳ

 ನಳಿನಾ ಡಿ.,

ಮದುವೆ ಆಗುವವರೆಗೆ ಇರುವ ತಹ ತಹ, ವರ್ಷಗಳುರುಳಿದಂತೆ, ಸಮಾಜದ ಕಟ್ಟಳೆಗೆ ಒಳ ಪಟ್ಟಂತೆ ಮಕ್ಕಳು ಮರಿ ದೊಡ್ಡವರಾಗುತ್ತಿದ್ದಂತೆ ಒಂದು ರೀತಿಯ ಠಿಚಿಡಿeಟಿಣhooಜ ಅದೃಷ್ಟಕ್ಕೆ ಒಲಿದು ಬಂದಿದೆಯಲ್ಲಾ ಅಂತ ಹೇಗೋ ಒಂದು ರೀತಿಯಲ್ಲಿ ದಿನದಿಂದ ದಿನಕ್ಕೆ ಸಮಾದಾನವಾಗಿ ಹೋಗುತ್ತಿ ರಬೇಕು ಸಂಬಂಧಗಳು. 
 ನಾನು-ನೀನು ಎಂಬುದ ಕ್ಕಿಂತ ನಾವು-ನಮ್ಮಕುಟುಂಬ-ನಮ್ಮ ಮಕ್ಕಳು ಎಂಬ ಭಾವನೆ ಬಲಿ ಯುತ್ತಾ ಹೋಗಬೇಕು.  ಇಲ್ಲದೇ ಹೋದಲ್ಲಿ ನಾನು ಮೇಲು-ನೀನು ಕೀಳು ಎಂಬ egoಡಿuಟe ಮಾಡುತ್ತಾ ಬರುತ್ತದೆ.  ಕೌಟುಂಬಿಕ ನ್ಯಾಯಾಲಗಳು ತ್ವರಿತಗ ತಿಯಲ್ಲಿ ಪ್ರಕರಣಗಳನ್ನು ಇತ್ಯರ್ಥ ಮಾಡದೆ ಆರು ತಿಂಗಳ ಕಾಲ ವಿಚ್ಛೇಧನಕ್ಕೆ ಅರ್ಜಿ ಹಾಕಿದ ದಂಪತಿ ಗಳಿಗೆ ಕಾಲಾವಕಾಶ ನೀಡುತ್ತಿದ್ದರೂ ವಿಚ್ಛೇದನಗಳ ಸಂಖ್ಯೆ ಕಡಿಮೆ ಆಗುತ್ತಿಲ್ಲ.  ಕುಟುಂಬ ವ್ಯವಸ್ಥೆಗಳು ಹಾಳಾಗಿದ್ದು, ಪೋಷಕರು ಮಕ್ಕಳ ಮುಂದೆ ವರ್ತಿಸುವ ರೀತಿ ಮುಂತಾದವು ಸಹ ಕಿರಿಯ ವಯಸ್ಸಿನಲ್ಲಿ ಅತ್ಯಧಿಕ ಪ್ರಭಾವ ಭೀರುತ್ತದೆ. 
ಹಳ್ಳಿಗಳಲ್ಲಿನ ಪಂಚಾಯತಿಯಲ್ಲಿ ವ್ಯಾಜ್ಯ ಇತ್ಯರ್ಥ ವಾಗುತ್ತಿದ್ದ  ವ್ಯವಸ್ಥೆಗಳು ಲವಲೇಶವಾದ ಮೇಲಂತೂ ಕುಟುಂಬಗಳ ಪಾಡು ಹೇಳತೀರದು.  ಮನೆಯಲ್ಲಿನ ದುಡಿಯುವ ಮೇಟಿ ಎಂದೇ ಅನ್ನಿಸಿ ಕೊಳ್ಳುತ್ತಿದ್ದ ಹಿರಿಯ ಯಜಮಾನ ತನ್ನ ಯಜಮಾನಿಕೆಯನ್ನು ಮಕ್ಕಳಿಗೆ ಬಿಟ್ಟುಕೊಟ್ಟಾಗ, ಆತನ ಮಾತಿಗೂ ಬೆಲೆ ತಪ್ಪುತ್ತದೆ.  ಕೂಡು ಕುಟುಂಬ ಗಳ ಸಂಖ್ಯೆಯೇ ನಶಿಸಿರುವ ಮಹಾನಗರಗಳಲ್ಲಿ ಮಕ್ಕಳು ಮಾಡಿಕೊಂಡು ಉದ್ಯೋಗಕ್ಕೆ ಹೋಗಲು ಅಮ್ಮಂದಿರು ಫ್ಲೇ ಹೋಂ ನಂಬಿಕೊಳ್ಳಬೇಕಾದ ಅನಿವಾರ್ಯತೆ, ’ಶಾಲೆಯೇ ಮಕ್ಕಳ ಮನೆ, ಶಿಕ್ಷಕಿ ತಾನೇ ಅಮ್ಮನೂ’ ಎಂಬಿತ್ಯಾದಿ ಹೊಸ ವ್ಯಾಖ್ಯೆಗಳನ್ನು ನಿಜವಾಗಿಯು ಹುಟ್ಟು ಹಾಕಿದೆ.

ಹ್ಞಾಂ! ವಿಧಿ ಆಘಾತ, ವಿಧಿ ವಿಲಾಸ ಇದೇನ ಹಾ!

 ಜೆ.ಸು.ನಾ,

ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಲವಾರು ವೈಚಿತ್ರ್ಯಗಳು, ವಿಸ್ಮಯಗಳು ಘಟಿಸುತ್ತಲೇ ಇರುತ್ತವೆ. ಇದೀಗ ರಾಹುಲ್ ಗಾಂಧಿ ಎಂಬ ಅಗೋಚರ ವಿಸ್ಮಯ ದೇಶದ ಮುಂದೆ ಎದುರಾಗಿದೆ.
ಭವಿಷ್ಯದ ಭರತ ಚಕ್ರವರ್ತಿಯೆಂದೇ ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್ ಪಕ್ಷ ಬಿಂಬಿಸತೊಡಗಿದೆ. ಅದರ ಮೊದಲ ಹೆಜ್ಜೆಯಾಗಿ ಇದೀಗ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರನ್ನಾಗಿ ಅವರನ್ನು ನೇಮಿಸಿದೆ.
ರಾಜಕಾರಣದಲ್ಲಿ ರಾಹುಲ್ ಗಾಂಧಿಗೆ ಇರುವ ಅರ್ಹತೆಗಳೇನು? ಈಗಿನ ವ್ಯವಸ್ಥೆಯಲ್ಲಿ ‘ಅರ್ಹತೆ’ ಎನ್ನುವ ಪದಕ್ಕೆ ಹಲವಾರು ಮುಖಗಳ ಅರ್ಥ ವಿಶಾಲತೆ ಇದೆ. ನೆಹರೂ ಕುಟುಂಬದ ಒಂದು ಸೆಲೆಯಿಂದ ಬಂದ ರಾಹುಲ್ ಗಾಂಧಿಗೆ ತನ್ನ ಅಜ್ಜ ಫಿರೋಜ್‌ಗಾಂಧಿಯ ವಂಶವಾಹಿನಿಯಲ್ಲಿನ ರಾಜಕೀಯ ಕೊಡುಗೆಯೇನೂ ಇದ್ದಂತಿಲ್ಲ. ರಾಜಕಾರಣವೆಂದರೆ ಕೇವಲ ಅಧಿಕಾರ ಗ್ರಹಣ ಮಾಡುವುದಕ್ಕಷ್ಟೇ ಸೀಮಿತಗೊಂಡಿರುವಂಥದ್ದೇ? ದುರಂತವೆಂದರೆ ಈಗಿನ ಅರ್ಥದಲ್ಲಿ ಅಥವಾ ನಂಬಿಕೆಯಲ್ಲಿ ಅದೇ ಆಗಿದೆ.
ರಾಹುಲ್ ನಿಗೂಢ ವ್ಯಕ್ತಿತ್ವ ರಾಹುಲ್‌ಗಾಂಧಿ ರಾಜಕಾರಣಕ್ಕೆ ಪ್ರವೇಶಿಸಿ ಸುಮಾರು ಹತ್ತು ವರ್ಷಗಳಾಗಿದ್ದರೂ ಅವರು ತಮ್ಮಸಾಮರ್ಥ್ಯದ ಯಾವ ಭಾಗಗಳನ್ನೂ ಈವರೆವಿಗೆ ಪ್ರಕಟಗೊಳಿಸಿಲ್ಲ. ಈ ಸಾಮರ್ಥ್ಯ ಅನ್ನೋದು ಇದೆಯಲ್ಲ; ಅದು ವ್ಯಕ್ತಿಯ ಮಾತು, ನಡೆ ಹಾಗೂ ಇಡೀ ದೇಶದ ಹೃದಯ ಮಿಡಿತದ ಜಾಡು ಹಿಡಿಯುವುದೇ ಆಗಿದೆ. ಇಂಥವೆಲ್ಲ